ಬಡ್ಡಿ ದರವು ಸಾಲದಾತನಿಂದ ಎರವಲು ಪಡೆದ ಹಣದ ಬಳಕೆಗಾಗಿ ಸಾಲಗಾರರು ಬಡ್ಡಿಯನ್ನು ಪಾವತಿಸುವ ದರ. ನಿರ್ದಿಷ್ಟವಾಗಿ, ಬಡ್ಡಿ ದರವು ಪ್ರತಿ ಅವಧಿಯಲ್ಲಿ (ಸಾಮಾನ್ಯವಾಗಿ ವರ್ಷಕ್ಕೆ ಉಲ್ಲೇಖಿತ) ಒಂದು ನಿರ್ದಿಷ್ಟ ಬಾರಿ ಪಾವತಿಸಲಾದ ಅಸಲಿನ ಶೇಕಡ. ಉದಾಹರಣೆಗೆ, ಒಂದು ಚಿಕ್ಕ ಕಂಪನಿ 2016-04-02 ವೇಬ್ಯಾಕ್ ಮೆಷಿನ್ ನಲ್ಲಿ.ಯು ಅದರ ವ್ಯಾಪಾರಕ್ಕಾಗಿ ಹೊಸ ಸ್ವತ್ತುಗಳನ್ನು ಖರೀದಿಸಲು ಬ್ಯಾಂಕಿನಿಂದ ಸಾಲಪಡೆಯುತ್ತದೆ, ಮತ್ತು ಪ್ರತಿಯಾಗಿ ಹಣದ ಬಳಕೆಯನ್ನು ಮುಂದೂಡಿ ಸಾಲಗಾರನಿಗೆ ಸಾಲ ನೀಡಿದ್ದಕ್ಕಾಗಿ ಸಾಲದಾತನು ಪೂರ್ವನಿರ್ಧರಿತ ಬಡ್ಡಿ ದರದಲ್ಲಿ ಬಡ್ಡಿಯನ್ನು ಪಡೆಯುತ್ತಾನೆ.